ಗಂಜೀಫಾ ಎಲೆಗಳ ಆಟ ಇಸ್ಪೀಟ್ ಆಟವನ್ನು ಹೋಲುವ ಭಾರತದ ಒಂದು ಪ್ರಾಚೀನ ಆಟ. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುದಾಗಿದೆ. ಭಾರತದಲ್ಲಿ ಮುಖ್ಯವಾಗಿ ಎರಡು ಬಗೆಯ ಗಂಜೀಫಾ ಎಲೆಗಳಿದ್ದು, ಅವುಗಳೆಂದರೆ ಮೊಘಲ್ ಗಂಜೀಫಾ ಮತ್ತು ದಶಾವತಾರ ಗಂಜೀಫಾ. ಭಾರತದಲ್ಲಿ ಆಂಧ್ರ, ಒಡಿಶಾ, ವಿಷ್ಣುಪುರ (ಬಂಗಾಳ), ಸಾವಂತವಾಡಿ (ಮಹಾರಷ್ಟ್ರ)ಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಇವು ಕೈಯಲ್ಲಿ ಬರೆದ ಅಥವಾ ಬಣ್ಣಹಾಕಿದ ಕಲೆಗಳನ್ನೊಳಗೊಂಡಿರುತ್ತವೆ. ಇವೆಲ್ಲುವುಗಳಿಗಿಂತ ಭಿನ್ನವಾದುದೆಂದರೆ ಮೈಸೂರಿನ ಗಂಜೀಫಾ ಎಲೆಗಳು. ಇವುಗಳನ್ನು ಎನ್ನುತ್ತಾರೆ. ಇವು ತಮ್ಮ ವಿಶಿಷ್ಟ ರೀತಿಯ ರಚನೆಗಳಿಂದ ಬೇರೆ ಗಂಜೀಫಾಗಳಿಗಿಂತ ಭಿನ್ನವಾಗಿವೆ. ಹತ್ತೊಂಬತ್ತನೇ ಶತಮಾನದ ಮೊದಲಲ್ಲಿ ಇವು ಮೈಸೂರಲ್ಲಿ ಅಭಿವೃದ್ಧಿಯಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರು ಇದನ್ನು ರಚಿಸಿ, ಪೋಷಿಸಿದರು. ಮೈಸೂರು ಗಂಜೀಫಾ ಎಲೆಗಳ ತಯಾರಿಕೆಯ ಕೇಂದ್ರವಾಗಿತ್ತು. ಅವರು ಅನೇಕ ರೀತಿಯ ಸಂಕೀರ್ಣ ಗಂಜೀಫಾ ಆಟಗಳನ್ನು ಅಭಿವೃದ್ಧಿಗೊಳಿಸಿದರು. ಒಂದು ಪಟ್ಟಿನಲ್ಲಿ 360 ಕಾರ್ಡ್‍ಗಳಿರುತ್ತಿದ್ದವು. ರಾಜರಿಂದ ರಚಿಸಲ್ಪಟ್ಟ 'ಶ್ರೀತತ್ವನಿಧಿ' ಕೃತಿಯ 'ಕೌತುಕನಿಧಿ' ವಿಭಾಗದಲ್ಲಿ ಈ ಆಟಗಳು ವಿವರಿಸಲ್ಪಟ್ಟಿವೆ ಹಾಗೂ ಈ ಕಾರ್ಡುಗಳ ಬಣ್ಣಗಳು ಸೂಚಿಸುವ ವಿನ್ಯಾಸಗಳು ತೋರಿಸಲ್ಪಟ್ಟಿವೆ. ೧೩ ಬಗೆಯ ಆಟಗಳು ಅದರಲ್ಲಿವೆ. ಹೆಚ್ಚಾಗಿ ಇದು ಅರಮನೆಗೆ ಸೀಮಿತವಾದ ಆಟವಾಗಿದ್ದರಿಂದ ಜನಸಾಮಾನ್ಯರಲ್ಲಿ ಈ ಆಟ ಜನಪ್ರಿಯವಾಗಲಿಲ್ಲ. ಹದಿಮೂರು Chadಗಳು ಹೀಗಿವೆ. ಚಾಮುಂಡೇಶ್ವರಿ ಜಗನ್ಮೋಹನ ನವೀನ ದಶಾವತಾರ ನವಗ್ರಹ ಪಂಚಪಾಂಡವ ದೇವಿ ದಶಾವತಾರಿ ದಿಕ್ಪಾಲ ಮನೋಹರ ಸರ್ವಮಂಗಳ ನವರತ್ನ ಸದ್ಯೋಜ್ಯಾತಾದಿ ಕೃಷ್ಣರಾಜ ನವೀನ ಈ ಮೈಸೂರು ಗಂಜೀಫಾ ಎಲೆಗಳು ತಮ್ಮ ವಿಶಿಷ್ಟತೆಯಿಂದ ಭಾರತದ ಭೌಗೋಳಿಕ ಸಂಕೇತಗಳಲ್ಲೊಂದಾಗಿ ನೋಂದಾಯಿಸಲ್ಪಟ್ಟಿದೆ. == ಉಲ್ಲೇಖಗಳು == == ಹೊರಕೊಂಡಿಗಳು == 2016-11-22 ವೇಬ್ಯಾಕ್ ಮೆಷಿನ್ ನಲ್ಲಿ., 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.